ಇತ್ತೀಚಿಗೆ ಶೌಚಾಲಯಕ್ಕೆ ಬಹಳಷ್ಟು ಜನ ಮೊಬೈಲ್ ತೆಗೆದುಕೊಂಡು ಹೋಗುತ್ತಿದ್ದಾರೆ, ಹಾಗು ಮೊಬೈಲ್ ನೋಡುತ್ತಾ, ಶೌಚ ಮಾಡಿದ್ದಾಗಲೀ, ಅದು ಮುಗಿದಿದ್ದಾಗಲಿ ಅರಿವಿಗೆ ಬರುವುದೇ ಇಲ್ಲ, ಗಂಟೆಗಟ್ಟಲೆ ಅಲ್ಲೇ ಕುಳಿತುಬಿಡುತ್ತಾರೆ, ಈ ರೀತಿಯ ಹವ್ಯಾಸ ಅದೆಷ್ಟು ಡೇಂಜರ್ ಗೊತ್ತಾ?
ಶೌಚ, ಮನಸ್ಸಿಗೂ, ಕರುಳಿಗೂ, ಕುಂಡಿಗೂ ಇರುವ ಕೊಂಡಿ
ಶೌಚ ಮಾಡುವಾಗ, ಮನಸು ನಿರ್ಮಲವಾಗಿ ಇರಬೇಕು, ಮನಸು ಒಂದುತರಹದ ಆಹ್ಲಾದ ಅನುಭವಿಸಬೇಕು, ಅದನ್ನು ಬಿಟ್ಟು ಶೌಚದ ಸಮಯದಲ್ಲಿ ಮೊಬೈಲ್ ಬಳಸಿದರೆ, ಗಮನ ಪೂರ್ತಿ ಮೊಬೈಲ್ ಕಡೆಗೆ ಹೋಗಿ, ಮನಸ್ಸಿಗೆ ಕರುಳು ಶುದ್ಧಿಯಾದ ಅನುಭವ ಸಿಗುವುದಿಲ್ಲ, ಇದರಿಂದ ಸುಲಭವಾಗಿ ಮನಸ್ಸಿಗೆ ಸಿಗಬೇಕಾದ ಮುದ ಕಮ್ಮಿಯಾಗಿ, ಒಂದು ತರಹದ ಉದ್ವೇಗವೇ ಮನಸ್ಸಿಗೆ ತುಂಬುತ್ತದೆ. ಇತ್ತೀಚಿಗೆ ಕುರ್ಚಿ ತರಹದ ಟಾಯ್ಲೇಟ್ ಕಮೋಡ್-ಗಳು ಬಂದಿರುವುದರಿಂದ, ಕುಳಿತುಕೊಳ್ಳಲು ಸುಲಭ ಎನಿಸುತ್ತದೆ, ಆದರೆ ಆ ಭಂಗಿಯಲ್ಲಿ ಕುಳಿತು ಶೌಚ ಮಾಡುವುದು ಹಾಗು ಅದೇ ಭಂಗಿಯಲ್ಲಿ ಜಾಸ್ತಿ ಹೊತ್ತು ಕುಳಿತು ಮೊಬೈಲ್ ಬಳಸುವುದು ಎರಡೂ ಅಪ್ಯಾಕಾರಿ
ಕುರ್ಚಿಯಲ್ಲಿ ಕುಳಿತ ಭಂಗಿಯಲ್ಲಿ ಕುಳಿತು ಶೌಚ ಮಾಡುವುದರಿಂದ
೧.ಕರುಳಿನ ಮೇಲೆ ಒತ್ತಡ ಬೀಳುತ್ತದೆ, ಆದ್ದರಿಂದ ಕಾಲಿಗೆ ಸಪೋರ್ಟ್ ಆಗಿ ಒಂದು ಸಣ್ಣ ಸ್ಟೂಲ್ (Foot stool) ಇಟ್ಟುಕೊಳ್ಳುವುದು ಉತ್ತಮ.
೨. ತೊಡೆ ಹಾಗು ಕಾಲಿನ ಮೇಲೆ ಒತ್ತಡ ಬಿದ್ದು, ರಕ್ತ ಸಂಚಲನೆ ನಿಂತು, numbness ಬರಬಹುದು, ರಕ್ತನಾಳಗಳು ಸಂಕುಚಿತವಾಗಿ ಕಾಲುಗಳು ಕ್ರಮೇಣ ಶಕ್ತಿ ಕಳೆದುಕೊಳ್ಳಬಹುದು.
೩. ಮೂಲವ್ಯಾದಿ ಖಾಯಿಲೆ ಬರಬಹುದು.

ಮೊಬೈಲ್ ಬಳಸುವುದರಿಂದ,
೧.ಮನಸು ಡಿಸ್ಟರ್ಬ್ ಆಗಿ, ಶೌಚದ ಅನುಭವ ಮನಸಿಗೆ ಸಿಗದೇ ಗೊಂದಲಮಯ ಆಗಬಹುದು.
೨.ಟಾಯ್ಲೆಟ್ಟಿನಲ್ಲಿರುವ ಬ್ಯಾಕ್ಟೀರೀಯಾಗಳು ಗುದಕ್ಕೆ ದಾಳಿ ಇಡಬಹುದು.
೩.ಮೊಬೈಲ್-ನ ಮೇಲ್ಮೈ ಮೇಲೆಯೂ ಬ್ಯಾಕ್ಟೀರೀಯಾಗಳು ಕುಳಿತು, ಅದನ್ನು ಮುಖದ ಬಳಿ ತಂದಾಗ, ಸುಲಭವಾಗಿ infection ಗೆ ಒಳಗಾಗಬಹುದು.
೪.ಶೌಚಾಲಯದ ಫ್ಲಶ್-ಮಾಡುವ ಬಟನ್, ಬಾಗಿಲಿನ ಹಿಡಿಕೆಗಳು ಮತ್ತು ಸೀಟಿನ ಮೇಲೆ ಇ.ಕೊಲಿ(E. coli), ಸಾಲ್ಮೊನೆಲ್ಲಾ ಮತ್ತು ನೊರೊವೈರಸ್‌ನಂತಹ ಮಾರಣಾಂತಿಕ ಬ್ಯಾಕ್ಟೀರಿಯಾಗಳು ಇರುತ್ತವೆ ಇದರಿಂದ ಅನೇಕ ಖಯಿಲೆಗಳು ಬರಬಹುದು.
೫.ಅನಗತ್ಯ ದೈಹಿಕ ಹಾಗು ಮಾನಸಿಕ ಒತ್ತಡ ಉಂಟಾಗಬಹುದು.

ಅನುಸರಿಸಬೇಕಾದ ಕ್ರಮಗಳು
೧. ಐದು ಅಥವಾ ಹತ್ತು ನಿಮಿಷದ ಒಳಗೆ ಶೌಚ ಮುಗಿಸಿ ಹೊರಬರಬೇಕು.
೨. ಇಂಡಿಯನ್ ಶೈಲಿಯ ಟಾಯ್ಲೆಟ್ ಕಮೋಡ್ ಬಳಸಬಹುದು
೩. ಯಾವುದೇ ಕಾರಣಕ್ಕೂ ಮೊಬೈಲ್ ಅನ್ನು ಟಾಯ್ಲೆಟ್ಟಿನ ಒಳಗೆ ತೆಗೆದುಕೊಂಡು ಹೋಗಬಾರದು
೪. ಅಗತ್ಯ ಕರೆಗಳಿಗಾಗಿ ತೆಗೆದುಕೊಂಡು ಹೋದರೂ, ಹೊರ ಬಂದ ತಕ್ಷಣವೇ ಮೊಬೈಲನ್ನು ಸ್ಯಾನಿಟೈಸಿಂಗ್ ವೈಪ್‌ಗಳಿಂದ (sanitizing wipes) ಸ್ವಚ್ಛಗೊಳಿಸಬೇಕು.
೫. ಶೌಚಾಲಯದಲ್ಲಿ ಆದಷ್ಟು ಗಾಳಿ ಬೆಳಕು ಆಡುತ್ತಿರಲಿ, ಹಾಗು ಪ್ರತೀ ದಿನವೂ ಅದನ್ನು ಶುಚಿಗೊಳಿಸುತ್ತಿರಿ.
ಮೊಬೈಲ್ ಬಿಡಿ, ಮುಂದೆ ನಡಿ
-Blogwriter

Leave a Reply